Index   ವಚನ - 1064    Search  
 
ಕಾಣಬಹ ತನು, ಕೇಳಬಹ ಧ್ವನಿಯಿಂದ ಆಳವಾಡಿ ಕಾಡುತ್ತದೆ ಲೋಕವನು, ಅಯ್ಯಾ ಅಯ್ಯಾ ಬೊಮ್ಮವೆ! ಅಣಕಿಸಿ ಲೋಕವನು ಕಾಡುತ್ತದೆ, ಅಯ್ಯಾ ಅಯ್ಯಾ ಬೊಮ್ಮವೆ! ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ್ಲ[ವ] ಶರಣನೊಬ್ಬನೆ ಗುಹೇಶ್ವರಾ.