ಕಾಮನ ಕಣ್ಣ ಮುಳ್ಳ ಕಳೆದು,
ಭೂಮಿಯ ತೈಲದ ಸೀಮೆಯ ಕೆಡಿಸಿ
ಹೋಮವನುರುಹಿ ದಕ್ಷನ ತಲೆಯನರಿದು
ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ?
ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು!
ಗುಹೇಶ್ವರನ ಕರುಣಪ್ರಸಾದಿ
ಮರುಳಶಂಕರದೇವರು ನಿಂದ ನಿಲವನು
ಉಪವಸಬಾರದು ಕಾಣಾ ಸಂಗನಬಸವಣ್ಣ.
Transliteration Kāmana kaṇṇa muḷḷa kaḷedu,
bhūmiya tailada sīmeya keḍisi
hōmavanuruhi dakṣana taleyanaridu
nis'sīmanāda mahimana nilavanariyabahude?
Ariviṅge asādhya upamege kaḍemuṭṭadu!
Guhēśvarana karuṇaprasādi
maruḷaśaṅkaradēvaru ninda nilavanu
upavasabāradu kāṇā saṅganabasavaṇṇa.
Hindi Translation काम की आँख का काँटा मिठाकर
धरती के तेल की सीमा बिगाडे
होम जलाकर दक्ष का सिर काटकर
निस्सीम बना महिम की स्थिति जान सकते?
ज्ञान का असाध्य उपमातीत !
गुहेश्वर का करुण प्रसादी
मरुळशंकरदेव कैसा है
कहना समझ देख संगनबसवण्णा।
Translated by: Eswara Sharma M and Govindarao B N