Index   ವಚನ - 1068    Search  
 
ಕಾಮನ ಕೊಲುವಲ್ಲಿ, ಹೋಮವ ಸುಡುವಲ್ಲಿ ತ್ರಿಪುರಸಂಹಾರದ ಕೀಲನರಿವಲ್ಲಿ ಆತನ `ಯೋಗಿ' ಎನಬೇಡ ಆತನ `ಭೋಗಿ' ಎನಬೇಡ, ಆತನೆ ಅಚ್ಚಲಿಂಗೈಕ್ಯನು! ಹಸಿವ ಮರೆದಲ್ಲಿ ವ್ಯಸನವರತಲ್ಲಿ, ಗುಹೇಶ್ವರಲಿಂಗವು, ಸಿದ್ಧರಾಮಯ್ಯದೇವರು ತಾನೆ!