ವಚನ - 1103     
 
ಕಾಯವೆ ಸಕಲ, ಪ್ರಾಣವೆ ಸಕಲ-ನಿಷ್ಕಲ, ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ ಬೇರೆ ಆಯತ ಸ್ವಾಯತ ಸನ್ನಿಹಿತವೆಂಬುದಿಲ್ಲ ನೋಡಾ. ಶಿವ ಶಕ್ತಿ ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ ಗುಹೇಶ್ವರಲಿಂಗದಲ್ಲಿ, ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚೆನ್ನಬಸವಣ್ಣಾ?