•  
  •  
  •  
  •  
Index   ವಚನ - 1107    Search  
 
ಕಾಲ-ಕಾಲವರವತ್ತು, ಕಾಲ ಕಾಲವನೆ ಅರಿವುದು. ಕಾಲ-ಕಾಲವೈವತ್ತು, ಕಾಲ ಕಾಲವನೆ ಅರಿವುದು. ಕಾಲ-ಕಾಲ ನಾಲ್ವತ್ತು, ಕಾಲ ಕಾಲವನೆ ಅರಿವುದು. ಕಾಲ-ಕಾಲ ಮೂವತ್ತು, ಕಾಲ ಕಾಲವನೆ ಅರಿವುದು. ಕಾಲ-ಕಾಲ ಇಪ್ಪತ್ತು, ಕಾಲ ಕಾಲವನೆ ಅರಿವುದು. ಕಾಲ-ಕಾಲ ಹತ್ತು, ಕಾಲ ಕಾಲವನೆ ಅರಿವುದು. ಇಂತೀ ಕಾಲಂಗಳ ಕಾಲವನರಿವಡೆ ಗುಹೇಶ್ವರಲಿಂಗದಲ್ಲಿ ಹೇಳು, ಚೆನ್ನಬಸವಣ್ಣಾ?
Transliteration Kāla-kālavaravattu, kāla kālavane arivudu. Kāla-kālavaivattu, kāla kālavane arivudu. Kāla-kāla nālvattu, kāla kālavane arivudu. Kāla-kāla mūvattu, kāla kālavane arivudu. Kāla-kāla ippattu, kāla kālavane arivudu. Kāla-kāla hattu, kāla kālavane arivudu. Intī kālaṅgaḷa kālavanarivaḍe guhēśvaraliṅgadalli hēḷu, cennabasavaṇṇā?
Hindi Translation काल - काल साठ; काल काल को जानना । काल - काल पचास : काल काल को जानना । काल - काल चालीस; काल काल को जानना । काल - काल तीस; काल काल को जानना । काल - काल-बीस; काल काल को जानना । काल-काल-दस : काल काल को जानना । ऐसे कालों का काल समझे तो गुहेश्वर लिंग में कहो चेन्नबसवण्णा ? Translated by: Eswara Sharma M and Govindarao B N