ಕೆಳಗೇಳು ಲೋಕಂಗಳಿಲ್ಲದ ಮುನ್ನ,
ಮೇಲೇಳು ಲೋಕಂಗಳಿಲ್ಲದ ಮುನ್ನ
ಸಮಸ್ತ ಬ್ರಹ್ಮಾಂಡಗಳಿಲ್ಲದ ಮುನ್ನ,
ಅಲ್ಲಿಂದತ್ತತ್ತ ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ!
ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ,
ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು
ನಾನು ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
Transliteration Keḷagēḷu lōkaṅgaḷillada munna,
mēlēḷu lōkaṅgaḷillada munna
samasta brahmāṇḍagaḷillada munna,
allindattatta basavaṇṇā nīnu liṅgabhakta, jaṅgamaprāṇi!
Śaśidharana śaraṇaṅge vr̥ṣadhara svāyatavāgi,
nam'ma guhēśvaraliṅgakke saṅganabasavaṇṇane bhaktanendaridu
nānu basavaṇṇana śrīpādakke
namō namō enutirdenu.
Hindi Translation नीचे के सात लोक न रहने के पहले,
ऊपर के सात लोक न रहने के पहले,
सहस्र ब्रह्मंड न रहने के पहले, वहाँ से उधर उधर;
बसवण्ण तू लिंग भक्त, जंगम प्राणी ।
शशिधर के शरण को वृषधर स्वायत बने ,
हमारे गुहेश्वर लिंग को संगनबसवण्णा ही भक्त समझे
मैं बसवण्णा के श्रीपाद को नमो नमो कह रहा हूँ ।
Translated by: Eswara Sharma M and Govindarao B N