Index   ವಚನ - 1151    Search  
 
ಗಿಡುವಿಲ್ಲದ ಪುಷ್ಪಕ್ಕೆ ಕುಸುಮವಿಲ್ಲದ ಪರಿಮಳವಿದ್ದಿತ್ತಯ್ಯಾ! `ಕ್ಷಂ ಕ್ಷಂ' ಎನುತ್ತಿದ್ದಿತಯ್ಯಾ. `ಹಂ ಹಂ' ಎನುತ್ತಿದ್ದಿತಯ್ಯಾ. ಬಯಲುವಿಡಿದು ಹೋದಡೆ, ಪಿಂಡಕ್ಕೆ ಹೆಣನ ಸುಡುವರಿಲ್ಲ ಗುಹೇಶ್ವರಾ!