•  
  •  
  •  
  •  
Index   ವಚನ - 1172    Search  
 
ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ, ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು, ನೋಡದ ಮುನ್ನವೆ ರೂಪವರ್ಪಿತವಾಯಿತ್ತು. ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು. ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು. ಅವಧಾರು ಅವಧಾರು ಲಿಂಗವೆ, ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ, ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು. ಗುಹೇಶ್ವರಾ, ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ. ಆರೋಗಿಸು ದೇವಾ.
Transliteration Ghanavappa pariyāṇadalli ondanuvina bōnavanaḷavaḍisi, paripariya padārthaṅgaḷu bagebageyinda baralu, nōḍada munnave rūpavarpitavāyittu. Muṭṭada munnave sōṅkarpitavāyittu. Rucisada munnave sukhavarpitavāyittu. Avadhāru avadhāru liṅgave, ninna manakke banda padārthava ninna ghanakke nīnarpisidaḍe, enna manakke banda padārthava nā ninagarpisuvenu. Guhēśvarā, ninage bharita bōnavanaḷavaḍisi nīḍaballavanāgi enagū ninagū saṅganabasavaṇṇana prasāda. Ārōgisu dēvā.
Hindi Translation श्रेष्ट थाली में एक योग्य नैवेद्य रखकर, तरह तरह पदार्थ अलग अलग रीति से आते, देखने के पहले ही रूप अर्पित हुआ था। छूने के पहले ही स्पर्श अर्पित हुआ था। रुचि के पहले ही सुख अर्पित हुआ था। स्वीकार स्वीकार करो लिंग, तेरे मन में आये पदार्थ को तेरे घन को तू अर्पित करे तो, मेरे मन में आये पदार्थों को मैं तुझे अर्पित करता हूँ। गुहेश्वरा तुझे भरपूर नैवेद्य सजाकर देने से मुझे-तुझे संगनबसवण्णा का प्रसाद- स्वीकार करो देवा । Translated by: Eswara Sharma M and Govindarao B N