ವಚನ - 1178     
 
ಚೌದಂತ ಮದಕರಿಯೊಳಡಗಿತ್ತು. ಬೆಳಗಿನ ಬಳಗದ ನವಪಂಕಜವೊ! ಮದಾಳಿಯ ಸುಳುಹಿನ ಸೂಕ್ಷ್ಮಂಗಲ್ಲದೆ. ಭಾವ ಪರಿಮಳವ ಭೇದಿಸಬಾರದು. ಅಳಿ ರತುನವ ನುಂಗಿದ ಪರಿಯೆಂತೊ? ಸಾಧ್ಯವಾಯಿತ್ತು ಸುಖಸಂಭಾಷಣೆ ಗುಹೇಶ್ವರಲಿಂಗದಲ್ಲಿ ಶರಣ ಚೆನ್ನಬಸವಣ್ಣಂಗೆ.