•  
  •  
  •  
  •  
Index   ವಚನ - 1194    Search  
 
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು. ಕುರುಹಿಂಗೆ ಕೇಡುಂಟು. ಜ್ಞಾನವೆಂಬುದೇನು? ಮನೋಭೇದ! ಇಂತಪ್ಪ ಜ್ಞಾನದ ಕೈಯಲ್ಲಿ, ಅರುಹಿಸಿಕೊಂಡಡೆ ನೀ ದೇವನಲ್ಲ, ಅರಿಯದಿದ್ದಡೆ ನಾ ಶರಣನಲ್ಲ. ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ?
Transliteration Jñānadinda nim'manaridihenendaḍe: Ariviṅge bandāgale kuruhu. Kuruhiṅge kēḍuṇṭu. Jñānavembudēnu? Manōbhēda! Intappa jñānada kaiyalli, aruhisikoṇḍaḍe nī dēvanalla, ariyadiddaḍe nā śaraṇanalla. Nī dēva, nā śaraṇanentāde hēḷā guhēśvarā?
Music Courtesy:
Hindi Translation ज्ञान से तुम्हें जाने कहें तो : ज्ञान से आने में वहीं चिह्न । चिह्न मे नाश है, ज्ञान कहें तो क्या? मनोभेद! ऐसे ज्ञान के हाथ में बताने से तू देव नहीं । न जाने तो मैं शरण नहीं । तू देव, मैं शरण कैसे हुए कहो गुहेश्वरा? Translated by: Eswara Sharma M and Govindarao B N