ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ.
ಇಂತೀ ಜ್ಞಾನದಾದ್ಯಂತವನರಿವರಿವೆ
ಸರ್ವಜ್ಞನಾದ ಈಶ್ವರ ನೋಡಾ.
ಅದೆಂತೆಂದಡೆ:
``ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ|
ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ||'' ಎಂದುದಾಗಿ
ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ
ನೀನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
Transliteration Jñānadudayavē bhakta, jñānada śūn'yavē aikya.
Intī jñānadādyantavanarivarive
sarvajñanāda īśvara nōḍā.
Adentendaḍe:
``Cidōdayaśca sadbhaktō cityūn'yan̄caikyamēva ca|
ubhayōraikya vijñēyātsarvajñamīśvaraḥ||'' endudāgi
intī ṣaṭsthaladoḷagādyantavaḍagiha bhēdava
nīnalladan'yaretta ballaru guhēśvarā.
Hindi Translation ज्ञानोदय ही भक्त,
ज्ञान शून्य ही ऐक्य ।
ऐसे ज्ञान का आदि अंत्य जानने से ही
सर्वज्ञ बना ईश्वर देख।
वह कैसे कहे तो-
“चिदोदयश्च सद्भक्तोंचिन्यूनमं चैक्यमेव च।
उभयोरैक्यविज्ञेयात्सर्वज्ञशमीश्वरः” ॥
कहने से -
ऐसे षटस्थल में आद्यंत छिपे भेद को
तेरे बिना अन्य कैसे जानते गुहेश्वरा।
Translated by: Eswara Sharma M and Govindarao B N