ವಚನ - 1198     
 
ಜೀವಕ್ಕೆ ಜೀವವೇ ಆಧಾರ, ಜೀವತಪ್ಪಿಸಿ ಜೀವಿಸಬಾರದು. ``ಪೃಥ್ವೀಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ| ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ||ಎಂದುದಾಗಿ ʼಅಹಿಂಸಾ ಪರಮೋಧರ್ಮʼವೆಂಬ ಶ್ರಾವಕರನು ಕಾಣೆ. ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.