Index   ವಚನ - 1245    Search  
 
ತೆರೆಯ ಮರೆಯ ಕುರುಹೆಂಬುದೇನೊ ಒಳಗೆ ಲಿಂಗವನನುವಿಡಿದ ಬಳಿಕ? ಪೂಜಿಸುವ ಭಕ್ತನಾರೊ? ಪೂಜಿಸಿಕೊಂಬ ದೇವನಾರೊ? ಮುಂದು ಹಿಂದು, ಹಿಂದು ಮುಂದಾಯಿತ್ತು ಗುಹೇಶ್ವರಾ ನಾನು ನೀನು, ನೀನು ನಾನಾದ ಬಳಿಕ ಮತ್ತೇನುಂಟು ಹೇಳಾ?