Index   ವಚನ - 1256    Search  
 
ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು? ಹರಿಬ್ರಹ್ಮಾದಿಗಳಗಿಯರು, ಮನುಮುನಿಗಳರಿಯರು, ಸಿದ್ಧಸಾಧಕರರಿಯರು. ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ? ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು.