ದ್ರವ್ಯ ನೀನು ದ್ರವ್ಯಾರ್ಥ ನೀನು;
ಪದ ನೀನು ಪದಾರ್ಥ ನೀನು.
ಸಕಲ ನೀನು ನಿಷ್ಕಲ ನೀನು.
ಸಕಲ ನಿಷ್ಕಲಾತ್ಮಕ ಪರಿಪೂರ್ಣ
ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ?
ಸಕಲ ನಿಷ್ಕಲ ತತ್ತ್ವಂಗಳು
ನಿಮ್ಮೊಳಗೆ ಸಮಾಸವನೆಯ್ದುವೆವೆಂದು
ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು
ಹೊತ್ತುಕೊಂಡೈದಾವೆ ನೋಡಾ!
ಅದೆಂತೆಂದಡೆ:
``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ|
ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ||
ಇಂತೆಂದುದಾಗಿ, ನಾದ ನೀನು, ಬಿಂದು ನೀನು, ಕಳೆ ನೀನು,
ಕಳಾತೀತ ನೀನು ಗುಹೇಶ್ವರಾ.
Transliteration Dravya nīnu dravyārtha nīnu;
pada nīnu padārtha nīnu.
Sakala nīnu niṣkala nīnu.
Sakala niṣkalātmaka paripūrṇa
śivanallade an'ya bhinnabhāva uṇṭe?
Sakala niṣkala tattvaṅgaḷu
nim'moḷage samāsavaneyduvevendu
tam'ma tam'ma aṅgada mēle sarvapadārthaṅgaḷa hesariṭṭu
hottukoṇḍaidāve nōḍā!
Adentendaḍe:
``Dravyārthaṁ ca mahādēvō dravyarūpō mahēśvaraḥ|
iti mē bhēdanaṁ nāsti sarvarūpas'sadāśivaḥ||
intendudāgi, nāda nīnu, bindu nīnu, kaḷe nīnu,
kaḷātīta nīnu guhēśvarā.
Hindi Translation द्रव्य तू, द्रव्यार्थ तू , पद तू , पदार्थ तू।
सकल तू , निष्कल तू ,
सकल निष्कलात्मक परिपूर्ण शिव के बिना अन्य भिन्न भाव है?
सकल निष्कल तत्व; तुममें समा हुए हैं कहना
अपने अपने अंग पर सर्व पदार्थों के नाम रखे
रहे हुए हैं देख।
वह कैसे कहें तो -
‘द्रव्यार्थं च महादेवो द्रव्यरूपो महेश्वरः।
इति में भेदनं नास्ति सर्वरूपसदाशिव:’।।
ऐसे – नाद तू , बिंदु तू , कला तू-
कलातीत तू गुहेश्वरा।
Translated by: Eswara Sharma M and Govindarao B N