Index   ವಚನ - 1292    Search  
 
ನಿಮ್ಮಲ್ಲಿ ಸನ್ನಿಹಿತನಾಗಿ ನಿಜವನರಿತು ಬೆರಸಿದ ಶಿವಯೋಗಿಯ ಕಂಡಡೆ ಎನ್ನ ಮನ ಅಗಲಲಾರದಯ್ಯಾ; ಎನ್ನ ತನು ಅಪ್ಪದಿರಲಾರದಯ್ಯಾ, ಎನ್ನ ಶಬುದ ಹೊಗಳಿದಲ್ಲದೆ ಸೈರಿಸಲಾರದಯ್ಯಾ. ಗುಹೇಶ್ವರಾ ನಿಮ್ಮ ಶರಣ ಶಿವಯೋಗಿ ಸಿದ್ಧರಾಮಯ್ಯನನಪ್ಪಿ ಸೊಪ್ಪಳಿದು ನಮೋ ನಮೋ ಎನುತಿರ್ದೆನು.