•  
  •  
  •  
  •  
Index   ವಚನ - 1296    Search  
 
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು, ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ! ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು, ಸುಖಿಯಾದೆ ನಾನು ಗುಹೇಶ್ವರಾ.
Transliteration Niścalavemba bhājanadalli nijajñānavemba akkiya tumbi, paramānandavemba jalavaneredu, svayaṁ prakāśavemba agniyinda pākavāda liṅgadōgaravu mahāghanadalli nindu ghanatr̥ptiyanīvuttiddittu kāṇire! Ada kaṇṇillade kaṇḍu kaiyillada koṇḍu bāyillade uṇḍa tr̥ptiya, arivillada arivininda aridu, sukhiyāde nānu guhēśvarā.
Hindi Translation निश्चल जैसे बर्तन में निजज्ञान जैसे चावल भरे, परमानंद जैसे जल भरे, स्वयं प्रकाश जैसी अग्नि से पका हुआ लिंग आहार महाघन में खडे घन तृप्ति दे रही थी देखिये । वह बिना आँखें देख, बिना हाथ लिए, बिना मुँह खाने की तृप्ति, बिना ज्ञान ज्ञान से जाने, सुखी बना मैं गुहेश्वरा। Translated by: Eswara Sharma M and Govindarao B N