ನೀನು' 'ನಾನು' ಎಂಬ ಉಭಯಸಂಗವಳಿದು
ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ
ತುಟ್ಟತುದಿಯ ಮೆಟ್ಟಿ ನೋಡಲು,
ಬಟ್ಟಬಯಲು ಕಾಣಬಹುದು ನೋಡಾ!
ಆ ಬಯಲ ಬೆರಸುವಡೆ ತ್ರಿಕೂಟಗಿರಿಯೊಳಗೊಂದು
ಕದಳಿಯುಂಟು ನೋಡಾ!
ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ!
ನಡೆ ಅಲ್ಲಿಗೆ ತಾಯೆ,
ಗುಹೇಶ್ವರಲಿಂಗದಲ್ಲಿ ಪರಮಪದವಿ
ನಿನಗೆ ಸಯವಪ್ಪುದು ನೋಡಾ.
Hindi Translation‘तू’ ‘मैं’ कहें उभय संग मिठे खुद आप हुए।
त्रिकूट जैसे सर्वोच्छ शिखर पर चढ़ देखे तो
शून्य जगह देख सकते देख-
उस शून्य को मिलाये तो- त्रिकूट गिरी में एक कदलि है देख।
उस कदलि को जानकर अंदर घुस देखे तो
चमकते प्रकाश की ज्योति है सुन।
चलो वहाँ माई।
गुहेश्वर लिंग में परम पदवि तुझे मिलेगा देख।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura