ವಚನ - 1311     
 
ನೆನೆವಡೆ ಮನವಿಲ್ಲ. ತನುವಿನಾಸೆ ಮುನ್ನಿಲ್ಲ, ನೆನೆವ ಮನವ ನೇತಿ ಮಾಡುವ ಘನಕ್ಕೆ ಘನವನೇನೆಂಬೆನಯ್ಯಾ? ತನ್ನಿಂದ ತಾನಾದುದು ಭಿನ್ನವಿಲ್ಲದೆ ನಿಂದ ನಿಜವು! ಅನಾಯಾಸದಿರವಿಂಗೆ ಬೆರಗಾದೆ ಗುಹೇಶ್ವರಾ.