•  
  •  
  •  
  •  
Index   ವಚನ - 132    Search  
 
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ. ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ. ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ. ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ.
Transliteration Dēśa guriyāgi layavāgi hōdavara kaṇḍe. Tamandha guriyāgi layavāgi hōdavara kaṇḍe. Kāma guriyāgi bendu hōdavara kaṇḍe. Nī guriyāgi hōdavaranāranū kāṇe guhēśvarā.
Music Courtesy: Desha Guriyagi Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Allama Prabhu Music Label : Lahari Music
Hindi Translation देश लक्ष्य करके लय हुओं को देखा। तमंध के लक्ष्य में लय हुओं को देखा। काम के लक्ष्य में जलेहुओंको देखा। तुम्हारे लक्ष्य में गये हुओं को किसी को न देखा गुहेश्वरा। Translated by: Eswara Sharma M and Govindarao B N
Tamil Translation மண்ணை அடைய விழைந்து அழிந்தவரைக் கண்டேன். அஞ்ஞானத்தால் துயருற்று அழிந்தவரைக் கண்டேன் காமமே குறியாக வெந்தவரைக் கண்டேன் உன்னையே குறியாக எண்ணிச் சென்ற எவரையும் நான் காணேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಮ ಗುರಿಯಾಗಿ = ಕಾಮತೃಪ್ತಿಗಾಗಿ; ತಮಂದ = ಅಜ್ಞಾನ, ಅಜ್ಞಾನದಿಂದಾಗಿ ಬೆಳೆದುಬರುವ ಸರ್ವನಾಶಕ ವ್ಯಸನಗಳು; ದೇಶ ಗುರಿಯಾಗಿ = ದೇಶವನ್ನೆ ಗುರಿಯಾಗಿರಿಸಿ; ಭೂಮಿಯ ಸಂಪಾದನೆ, ರಕ್ಷಣೆಗಳಿಗಾಗಿ; ರಾಜ್ಯಗಳ ಗಳಿಕೆ ಹಾಗೂ ವಿಸ್ತಾರಕ್ಕಾಗಿ ; ಲಯವಾಗಿ ಹೋದವರು = ತಮ್ಮ ಬದುಕಿನಾದ್ಯಾಂತ ಹೋರಾಡಿ, ಕೊನೆಗೆ ಏನನ್ನೂ ಸಂಪಾದಿಸದೆ ಪ್ರಾಣತೆತ್ತವರು; Written by: Sri Siddeswara Swamiji, Vijayapura