Index   ವಚನ - 1324    Search  
 
ಪಂಚಮಹಾಪಾತಕಂಗಳು ಹೋವ ಠಾವ ಕಂಡೆ. ಸರ್ವದುಃಖಗಳು ಬೇವ ಠಾವ ಕಂಡೆ. ಕಾಲನ, ಕಾಲಲೊದೆವ ಠಾವ ಕಂಡೆ. ಕಾಮನ ಕೈಯ ಕೊಯ್ವ ಠಾವ ಕಂಡೆ. ಮಾಯೆಯ ಬಾಯ ಕುಟ್ಟುವ ಠಾವ ಕಂಡೆ. ಗುಹೇಶ್ವರಲಿಂಗಯ್ಯನ ಎನ್ನ ಕರಸ್ಥಲದಲ್ಲಿ ಕಣ್ಣು ತುಂಬಿ ಕಂಡೆ.