•  
  •  
  •  
  •  
Index   ವಚನ - 1330    Search  
 
ಪರವನರಿದ ಸತ್ಪುರುಷರ ಸಂಗದಿಂದ ಶಿವಯೋಗದ ವಚನಾಮೃತವನು, ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ, ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ ಆ ಸುಖವು ಪರಿಣಾಮವನೊಡಗೂಡುವುದು! ಹೀಂಗಲ್ಲದೆ, ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು ಕಾಯದಲ್ಲಿ ವಚನಾಮೃತವ ತುಂಬಿದಡೆ, ಭಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ.
Transliteration Paravanarida satpuruṣara saṅgadinda śivayōgada vacanāmr̥tavanu, sadbhaktiyuḷḷa mahēśvaranu tanna śrōtramukhadalli kēḷi, manōmukhadalli hāraisi, tr̥ptimukhadalli santōṣavaneydaballaḍe ā sukhavu pariṇāmavanoḍagūḍuvudu! Hīṅgallade, sansāraviṣayarasava tam'ma hr̥dayakūpadalli tumbikoṇḍippa jīvaru kāyadalli vacanāmr̥tava tumbidaḍe, bhinnaghaṭadalli udakava hoydante kāṇā guhēśvarā.
Hindi Translation पर जाने सत्पुरुषों के संग से शिवयोग के वचनामृत को, सद्भक्ति रहा महेश्वर अपने श्रोत्रु मुख से सुनकर, मनोमुख में शुभकामना से, तृप्त मुख में संतोष पा सके तो वह सुख परिणाम से मिला हुआ होता है। ऐसा नहीं तो, संसार विषय रस को अपने हृदयकूप में भरे हुए जीवी शरीर में वचनामृत भरे तो, भिन्न शरीर में उदक डाले जैसे देख गुहेश्वरा। Translated by: Eswara Sharma M and Govindarao B N