•  
  •  
  •  
  •  
Index   ವಚನ - 1334    Search  
 
ಪರುಷವಾದರೂ ಒಂದರಲ್ಲಿ ಇರಿಸಬೇಕು. ರತ್ನವಿಶೇಷವಾದಡೂ ಕುಂದಣದಲ್ಲಿ ಬಂಧಿಸಿ ಸಂಧಿಸಬೇಕು. ಲಿಂಗವ ಹಿಡಿದಲ್ಲಿ ಪೂಜಿಸುವ ಅಂಗವಿರಬೇಕು. ಇದು ಕಾರಣ, ಗುಹೇಶ್ವರಲಿಂಗವನರಿದು ಪೂಜೆಯ ಮರೆದಿರಲಾಗದು ಮರೆಯಲಿಲ್ಲ ಕಾಣಾ ಚಂದಯ್ಯಾ
Transliteration Paruṣavādarū ondaralli irisabēku. Ratnaviśēṣavādaḍū kundaṇadalli bandhisi sandhisabēku. Liṅgava hiḍidalli pūjisuva aṅgavirabēku. Idu kāraṇa, guhēśvaraliṅgavanaridu pūjeya marediralāgadu mareyalilla kāṇā candayyā
Hindi Translation परुष हो तो एक में रखना चाहिए। रत्न विशेष हो तो सोने में जोड़कर रखना चाहिए। लिंग अपनाये तो पूजा करने का अंग रहना चाहिए। इस कारण, गुहेश्वर लिंग जानकर न भूले देख चंदय्या। Translated by: Eswara Sharma M and Govindarao B N