ಪಾರ್ವತಿಯು ಪರಶಿವನ ಸತಿಯೆಂಬ
ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ
ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು
ನಮ್ಮ ಹರಲಿಂಗನ ಮಗನೆಂಬ
ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರಹರನ ಮಗನೆಂಬ
ಭವಹರಗುರುದ್ರೋಹಿಗಳು ನೀವು ಕೇಳಿರೆ.
ಅಜಾತನ ಚರಿತ್ರ ಪವಿತ್ರ.
ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ
ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ
ಗುರುವಿನ ಗುರು ಪರಮಗುರುವರ[ನ]
ತೋರಿದನಯ್ಯಾ ಸಿದ್ಧರಾಮಯ್ಯ
ಚೆನ್ನಬಸವಣ್ಣನು.
Hindi Translationपार्वती परशिव की सती कहें शिवद्रोही तुम सुनो।
विनायक परशिव का पुत्र कहें पातक दुखी तुम सुनो।
स्वामी कार्तिकेय हमारे हर लिंग का बेटा कहें
लिंगद्रोही तुम सुनो।
भैरव भयंकर हर का बेटा कहें
भवहर गुरुद्रोही तुम सुनो।
अजात का चरित्र पवित्र है।
हमारे गुहेश्वर लिंग के प्रसाद को अर्पित करनेवाला
पूर्वाचारी संगनबसवण्णा के बेटा बने,
आदि लिंग अनादि शरण
गुरु का गुरु परम गुरुवर को
दिखाया सिद्धरामय्या को चेन्नबसवण्णा ने।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura