Index   ವಚನ - 1357    Search  
 
ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ ಹೊಂದದ ಶಿಶುವ ಕಂಡೆ. ಮುಟ್ಟಿ ಪೂಜಿಸಹೋದಡೆ ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ. ಗುಹೇಶ್ವರ ಬಯಲು!