•  
  •  
  •  
  •  
Index   ವಚನ - 1389    Search  
 
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ ತಲೆದೋರದ ಮುನ್ನ-ಅಲ್ಲಿಂದತ್ತ ಬಯಲೆ ಬಲಿದು ಸ್ವರೂಪವಾಯಿತ್ತು. ಆ ಸ್ವರೂಪಿನ ಘನತೆಯ ಉಪಮಿಸಬಾರದು. ನೋಡಬಾರದ ಬೆಳಗು, ಕೂಡಬಾರದ ಮೂರ್ತಿ, ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳಗಿನ ಮೂಲವ ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೆತ್ತ ಬಲ್ಲರೊ?
Transliteration Brahma viṣṇu rudra īśvara sadāśiva paramēśvararemba sandaṇi taledōrada munna-allindatta bayale balidu svarūpavāyittu. Ā svarūpina ghanateya upamisabāradu. Nōḍabārada beḷagu, kūḍabārada mūrti, akhaṇḍa apratima nam'ma guhēśvaraliṅgada beḷagina mūlava liṅgasaṅgigaḷallade mikkina aṅgavikārigaḷetta ballaro?
Hindi Translation ब्रह्म विष्णु रुद्र ईश्वर सदाशिव परमेश्वर कहे समूह दिखाने के पहले – उससे उधर शून्य ही स्वरूप बना था। उस स्वरूप की घनता कीउपमा नहीं कर सकते। न देखनेवाला प्रकाश, न देनेवाली मूर्ति। अखंड अप्रतिम हमारे गुहेश्वर लिंग का मूल लिंगसंगी के बिना और अन्य अंगविकारी क्या जानते ? Translated by: Eswara Sharma M and Govindarao B N