ಭಕ್ತ ಜಂಗಮದ ಷಟ್‍ಸ್ಥಲದ, ಸಕೀಲ
ಸಂಬಂಧವನಾರು ಬಲ್ಲರು ಹೇಳಾ.
ಅದೇನು ಕಾರಣವೆಂದಡೆ:
ಹುಸಿವುಳ್ಳವ ಭಕ್ತನಲ್ಲ,
ವಿಷಯವುಳ್ಳವ ಮಹೇಶ್ವರನಲ್ಲ.
ಆಸೆಯುಳ್ಳವ ಪ್ರಸಾದಿಯಲ್ಲ,
ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ.
ತನುಗುಣವುಳ್ಳವ ಶರಣನಲ್ಲ,
ಜನನ-ಮರಣವುಳ್ಳವ ಐಕ್ಯನಲ್ಲ.
ಈ ಆರರ ಅರಿವಿನ ಅರ್ಥದ, ಸಂಪತ್ತಿನ
ಭೋಗ ಹಿಂಗಿದರೆ, ಸ್ವಯಂ ಜಾತನೆಂಬೆ
ಆ ದೇಹ ನಿಜದೇಹವೆಂಬೆ,
ಆ ದೇಹ ಗುರುಗುಹೇಶ್ವರನೆಂಬೆ.
Hindi Translationभक्त जंगम के षट्स्थल का,
रहस्य संबंध को कौन जानते कह।
वह क्या कारण कहें तो –
भूखे रहे भक्त नहीं,
विषयी रहे माहेश्वर नहीं,
आशा रहीप्रसादी नहीं,
जीवगुण रहा प्राणलिंगी नहीं,
तनु गुण रहा शरण नहीं,
जनन मरण रहा ऐक्य नहीं,
इन छः ज्ञान के अर्थ संपत्ती का
भोग नाश हो तो, स्वयं जात कहूँगा।
उस देहको निज देह कहूँगा।
उस देह को गुरु गुहेश्वर कहूँगा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura