ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು.
ಇದೇನು ಹೇಳಾ ಗುಹೇಶ್ವರಾ?
Transliteration Rakkasigibbaru makkaḷu, toṭṭila mēlaivaru,
rakkasi bāṇatiyādaḍe makkaḷiginnento!
Toṭṭila tūguve jōguḷavāḍuve
rakkasibāṇatiya toṭṭilu nuṅgittu.
Idēnu hēḷā guhēśvarā?
English Translation 2 An ogress has two brats, and she has
Five more in the cradle.
When an ogress breeds so, alas for her brood!
While I rock the cradle and sing a lullaby,
The cradle has gobbled the ogress!
Tell us, O Guheśvara, what this may mean.
Hindi Translation राकसी के दो बच्चे, झूले पर पाँच !
राकसी प्रसूता है, तो बच्चों का क्या ?
झूला झूलते, लोरी गाऊँगा !
राकसी ने प्रसूती का झूल निगला ;
यह क्या कहो गुहेश्वरा ?
Translated by: Eswara Sharma M and Govindarao B N
Tamil Translation அரக்கிக்கு இரு குழந்தைகள் தொட்டிலிலே ஐவர்.
அரக்கி மகவீன்றால் குழந்தைகள் என்ன ஆவர்?
தொட்டிலை அசைப்பேன், தாலாட்டுப்பாடுவேன்
மகவீன்ற அரக்கியை தொட்டில் விழுங்கியது.
குஹேசுவரனே இது என்னவென்று கூறுவாயா?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಬ್ಬರು ಮಕ್ಕಳು = ದೇಹದ ಒಳಗೆ ಮನ-ಬುದ್ಧಿಗಳಿಬ್ಬರು ಮಕ್ಕಳು; ಜೋಗುಳವಾಡು = ಇಂದ್ರಿಯಗಳಿಗೆ ವಿಷಯಗಳನ್ನೀಯುವುದರಲ್ಲೇ ಸಂತೋಷಿಸುವುದು; ತೊಟ್ಟಿಲ ತೂಗು = ವಿಷಯಗಳನ್ನಿತ್ತು ಇಂದ್ರಿಯಗಳನ್ನು ತೃಪ್ತಿಪಡಿಸು ; ತೊಟ್ಟಿಲ ಮೇಲೈವರು = ದೇಹದ ಮೇಲಿರುವ ಪಂಚಜ್ಞಾನೇಂದ್ರಿಯಗಳು ; ತೊಟ್ಟಿಲು = ದೇಹ; ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳಿಗೆ ಆಶ್ರಯವಾದದ್ದು; ಬಾಣತಿ = ಅದಮ್ಯ ಆಸೆಯ ಮಾಯೆ; ರಕ್ಕಸಿ = ಸರ್ವವನ್ನೂ ನುಂಗುವ ಮಾಯೆ, ವ್ಯಷ್ಟಿ ಮತ್ತು ಸಮಷ್ಟಿ ಎಲ್ಲವೂ ಆಕೆಯ ಕಾರ್ಯಮಂಡಲ;
Written by: Sri Siddeswara Swamiji, Vijayapura