•  
  •  
  •  
  •  
Index   ವಚನ - 13    Search  
 
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡಗಂಡರನರಸಿ ತೊಳಲುತ್ತೈದಾರೆ. ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ: ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು. ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು. ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
Transliteration Aṇḍajavemba tattiyoḍedu piṇḍa pallaṭavāgi gaṇḍagaṇḍaranarasi toḷaluttaidāre. Khaṇḍamaṇḍaladoḷage kaṇḍenondu cōdyava: Kandana kaiya darpaṇava pratibimba nuṅgittu. Ondu giḷi ippattaidu giḷiyāyittu divarātriyudayada beḷaganu kattale nuṅgittu. Guhēśvaranalliye nirvayalāgittu.
Hindi Translation अंडज नामक अंडा फोड़कर पिंड पल्लट होकर ज्ञानी ज्ञानियों के ढूँढकर क्लांत हो रहे हैं। सीमित संसार में एक विस्मय देखा : बच्चे के हाथ का दर्पण प्रतिबिंब को निगला । दिवारात के उदय की रोशनी अंधेरा निगली, गुहेश्वरा में छिप गया । Translated by: Eswara Sharma M and Govindarao B N
Tamil Translation அண்டஜம் எனும் முட்டை உடைந்து, பிண்டம் மாறுபட்டு ஞானிகளைத் தேடி துன்புறுகின்றனர். எல்லையுடைய உலகிலே ஒரு அற்புதத்தைக் கண்டேன், குழந்தையின் கையிலுள்ள ஆடியைப் பிரதிபிம்பம் விழுங்கியது, இரவும் பகலும் ஒளிரும் ஒளியை இருள் விழுங்கியது, குஹேசுவரனிடம் ஒடுங்கியது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಡ = ಚಿತ್ ಬ್ರಹ್ಮಾಂಡ(ಮಹಾಲಿಂಗ); ಅಂಡಜ = ಆ ಚಿದ್ಬ್ರಹ್ಮಾಂಡದಿಂದ ಹುಟ್ಟಿದ ಜಡಬ್ರಹ್ಮಾಂಡ; ಕಂದ = ಶಿವಾಂಶನಾದ ಜೀವ; ಕೈಯ = ತನ್ನ; ಖಂಡಮಂಡಲ = ಪರಿಮಿತಿಗೊಂಡ ಜಗತ್ತು; ಗಂಡಗಂಡರು = ಮಾಯೆಯನ್ನು ಮೀರಿದವರು, ಮಾಯೆಯನ್ನು ಆಳಿದವರು, ಸುಜ್ಞಾನಿಗಳು, ಅನುಭಾವಿಗಳು; ದರ್ಪಣ = ಪರಿಶುದ್ದ ಅಂತಃಕರಣ ; ದಿವಾರಾತ್ರಿಯುದಯದ ಬೆ = ನಿತ್ಯ ಪ್ರಜ್ವಲಿಸುವ ಬೆಳಕು, ಜ್ಞಾನಪ್ರಕಾಶ, ಚಿತ್ಪ್ರಕಾಶ; ನಿರ್ವಯಲು = ನಿರ್ಬಯಲು, ಅಡಗಿಹೋಗು, ಲಯವಾಗು; ಪಿಂಡ = 1) ಜಡಪಿಂಡ, 2) ಚಿತ್ಪಿಂಡ; ದೇಹ ಮತ್ತು ಜೀವಾತ್ಮ; ಪ್ರತಿಬಿಂಬ = ಪರವಸ್ತು, ಬ್ರಹ್ಮ; Written by: Sri Siddeswara Swamiji, Vijayapura