ಭೂತವೈದರಿಂದ ಸ್ಥೂಲ ತನು.
ಮನ ಬುದ್ಧಿ ಚಿತ್ತ ಅಹಂಕಾರದಿಂದ ಸೂಕ್ಷ್ಮತನು.
ಭಾವಜ್ಞಾನದಿಂದ ಕಾರಣತನು.-
ಈ ತ್ರಿವಿಧವು ಚೈತನ್ಯವಿಡಿದ ಕಾರಣ,
ಭೂತ ಅಂತಃಕರಣ, ಭಾವ ಜ್ಞಾನಕ್ಕೆ ಸ್ವತಂತ್ರತೆಯಿಲ್ಲ.
ಆ ಚೈತನ್ಯಕ್ಕೆ ಶರೀರಭಾವವಿಲ್ಲದಿರ್ದಡೆ ತೋರಿಕೆ ಇಲ್ಲವಾಗಿ
ಆ ಚೈತನ್ಯವೆ ತನ್ನ ಲೀಲೆಯಿಂದ ಶರಣನೆನಿಸಿತ್ತು.
ಆ ಶರಣನ ಪಂಚಭೌತಿಕ ತನುವ
ಇಷ್ಟಲಿಂಗ ಇಂಬುಗೊಂಡಿಹ ಕಾರಣ,
ಕಾಯ ಪಂಚಬ್ರಹ್ಮಮಯವಾಯಿತ್ತು.
ಅಂತಃಕರಣ[ವ] ಅಂತಃಪ್ರೇರಕ
ಪ್ರಾಣಚೈತನ್ಯಲಿಂಗವೊಳಕೊಂಡ ಕಾರಣ,
ಶರಣನ ಕರಣಂಗಳೆ ಲಿಂಗಕಿರಣಂಗಳಾದವು.
ಭಾವ ಜ್ಞಾನವೆಡೆಗೊಂಡು [ಲಿಂಗ] ತೃಪ್ತಿಸ್ವರೂಪದಿಂದ
ಆನಂದಮಯವಪ್ಪ ಕಾರಣ,
ಶರಣ ಸಚ್ಚಿನ್ಮಯನಾದ-ಇದು ಕಾರಣ,
ಗುಹೇಶ್ವರಾ ನಿಮ್ಮ ಶರಣರ ದೃಷ್ಟಲಿಂಗವೆಂಬೆ!
Hindi Translationभूतवैद्यों से स्थूल तनु।
मन,बुद्धि, चित्, अहंकार से सूक्ष्म तनु।
भावज्ञान से कारण तनु-ये त्रिविध चैतन्य रहने के कारण,
भूत अंतःकरण भाव ज्ञान को स्वतंत्रता नहीं।
उस चैतन्य को शरीर भाव न रहने से दिखा न रहने से,
वह चैतन्य ही अपनी लीला से शरण कहलाया था।
उस शरण के पंच भौतिक तनु के इष्टलिंग आश्रय देने कारण,
शरीर पंच ब्रह्ममय हुआ था ।
अंतःकरण (व) अंतःप्रेरक प्राणचैतन्य लिंगाश्रय लेने कारण
शरण के कारण ही लिंग किरण बने।
भाव ज्ञान मिलकर (लिंग) तृप्ति स्वरुप से
आनंदमय हुआ कारण,
शरण सच्चिन्मय हुआ – इस कारण
गुहेश्वरा तुम्हारे शरणों को दृष्ट लिंग कहूँगा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura