ವಚನ - 1410     
 
ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ, ಅದು ತಾ ಮುನ್ನಿನಂತೆ ಇದ್ದಿತ್ತು. ಮುಂದೆ ಭಾವಿಸಬೇಡ ಕೂಡಬೇಡ, ಕೂಡಿಹೆನೆಂಬ ಭಾವ ಮುನ್ನವೆ ಬೇಡ ಗುಹೇಶ್ವರಾ.