ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ
ಬೆಳೆವ ಫಲವೃಕ್ಷದಂತೆ,
ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ,
ನೀ ಭೂಮಿಯಾಗಿ ನಾ ಸಸಿಯಾಗಿ
ಬೆಳೆದ ಬೆಂಬಳಿಯಲ್ಲಿ
ಗುಹೇಶ್ವರಲಿಂಗವೆಂಬುದು ಫಲವಾಯಿತ್ತು.
ಅರಿದ ಅರಿಕೆ ರಸವಾಯಿತ್ತು.
ಸಂಗನಬಸವಣ್ಣನಿಂದ ಎನ್ನಂಗ ಬಯಲಾಯಿತ್ತು!
Transliteration Bhūmiyalli huṭṭi antaraṅgadalli
beḷeva phalavr̥kṣadante,
sarvarige bhūtahitavāgi phalarasavanīvante,
nī bhūmiyāgi nā sasiyāgi
beḷeda bembaḷiyalli
guhēśvaraliṅgavembudu phalavāyittu.
Arida arike rasavāyittu.
Saṅganabasavaṇṇaninda ennaṅga bayalāyittu!
Hindi Translation भूमी में पैदे अंतरंग में पले फलवृक्ष जैसे,
सब को भूतहित बने फल रस देने जैसे,
तू भूमि बने, मैं सस्य बना पले अनुसरण में
गुहेश्वर लिंग कहना फल हुआ था।
समझी माँग रस हुआ था।
संगनबसवण्णा से मेरा अंग शून्य हुआ था।
Translated by: Eswara Sharma M and Govindarao B N