•  
  •  
  •  
  •  
Index   ವಚನ - 142    Search  
 
ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ, ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು. ಅಂಗದ ಆಪ್ಯಾಯನಕ್ಕೆ ಲಿಂಗವನರಸುವ, ಭಂಗಿತರನೇನೆಂಬೆ ಗುಹೇಶ್ವರಾ.
Transliteration Aṣṭadaḷakamalada mēlippa niśśūn'yana marmavanariyade, prāṇaliṅgavendembaru, santeya suddiya van̄cakaru. Aṅgada āpyāyanakke liṅgavanarasuva, bhaṅgitaranēnembe guhēśvarā.
Hindi Translation अष्टदल कमल पर रहे निःशून्य का मर्म न जान ते, बाजार विषय वंचक प्राणलिंग कहते हैं। शरीर तृप्ति के लिए लिंग को ढूँढनेवाले कमीनों को क्या कहूँ गुहेश्वरा ! Translated by: Eswara Sharma M and Govindarao B N
Tamil Translation எட்டிதழ் தாமரையின் மீதுள்ள இறைவனின் மர்மத்தையறியாது, பிராணலிங்கத்தைக் குறித்து வெற்றுச் சொல்லாடும் வஞ்சகர்கள் வயிற்றுப்பாடிற்காக இலிங்கத்தைத் தரிக்கும் கீழோரை நான் என்னென்பேன் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗದಾಪ್ಯಾಯನಕ್ಕೆ = ಉದರಪೋಷಣೆಗೆ, ತನುವಿನ ತೃಪ್ತಿಗೆ; ಅಷ್ಟದಳ ಕಮಲ = ಹೃದಯ, ಭಾವನೆಗಳ ಕೇಂದ್ರವಾದ ಅಂತರಂಗ; ನಿಃಶೂನ್ಯ = ಪರಮಚೈತನ್ಯ, ಅಂತರಾತ್ಮ, ಪ್ರಾಣಲಿಂಗ; ಭಂಗಿತರು = ಹೀನರು, ಶರಣ ಸಂಕುಲಕ್ಕೆ ಸಲ್ಲದವರು; ಮರ್ಮ = ರಹಸ್ಯ; Written by: Sri Siddeswara Swamiji, Vijayapura