ಮರನೊಳಗಣ ಪತ್ರೆ ಫಲಂಗಳು,
ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು,
ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ,
ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ.
Transliteration Maranoḷagaṇa patre phalaṅgaḷu,
marakālavaśadalli tōruvante,
haranoḷagaṇa prakr̥tisvabhāvaṅgaḷu,
harabhāvadicchege tōruvavu.
Līleyādaḍe umāpati,
līle tappidaḍe svayambhu guhēśvarā.
Hindi Translation पेड़ के पत्ते फल
ऋतु के अनुसार प्रकट होने जैसे,
हर में समागये प्रकृति स्वभाव
हर भावानुसार प्रकट होंगे।
लीला हो तो उमापति ;
लीला छूके तो स्वयंभू गुहेश्वरा।
Translated by: Eswara Sharma M and Govindarao B N
Tamil Translation மரத்திலுள்ள துளிர்களும் பழங்களும்
பருவகாலத்தில் தோன்றுவதனைய,
பரம்பொருளின் இயற்கை சார்ந்த இயல்புகள்
அதன் சங்கல்பத்தினால் தோன்றுமாம்
இலீலை எனின் உமாபதி
இலீலையற்ற பொழுது சுயம்பு குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಮಾ = ವಿಶ್ವವನ್ನು ಅಭಿವ್ಯಕ್ತಗೊಳಿಸಿದ ಶಕ್ತಿ; ಉಮಾಪತಿ = ಆ ಶಕ್ತಿಗೆ ಆಧಾರವಾಗಿ ಇರುವ ಪರಮಾತ್ಮ; ಪ್ರಕೃತಿ = ಭೌತವಿಶ್ವದ ಉಪಾದಾನಕಾರಣವಾದ ಮಹಾಶಕ್ತಿ; ಕ್ರಿಯಾಶಕ್ತಿ, ಜ್ಞಾನಶಕ್ತಿ ಮತ್ತು ಇಚ್ಚಾಶಕ್ತಿಗಳು ಅದರ ಮೂರು ಅಂಗಗಳು; ಮರಕಾಲವಶ = ಮರವು ಚಿಗುರುವ, ಹೂ ಬಿಡುವ, ಕಾಯಾಗುವ ಋತುಕಾಲ; ಲೀಲೆ = ನಿರ್ನಿಮಿತ್ತವಾದ ವಿಶ್ವಾಭಿವ್ಯಕ್ತಿ; ಸ್ವಭಾವಂಗಳು = ಪ್ರಕೃತಿಯಿಂದ ಹೊರಹೊಮ್ಮುವ ತತ್ವ್ತಗಳ ಸಮುದಾಯ; ಸ್ವಯಂಭು = ತಾನೆ ತಾನಾಗಿರುವ ಪರವಸ್ತು; ಹರ = ಪರಮಾತ್ಮ; ಹರಭಾವದಿಚ್ಚೆ = ಹಲವಾಗಬೇಕು ಎಂಬ ಪ್ರಥಮ ಸಂಕಲ್ಪ; ಆ ಸಂಕಲ್ಪಾನುಸಾರವಾಗಿ ಈ ಬೃಹತ್ ವೈವಿಧ್ಯಪೂರ್ಣ ವಿಶ್ವವನ್ನು ನಿರ್ಮಾಣಗೊಳಿಸುವ ಇಚ್ಚೆ;
Written by: Sri Siddeswara Swamiji, Vijayapura