ಮೂರು ಲೋಕದ ಧೀರೆ ನಿದ್ರಾಂಗನೆ,
ಎಲ್ಲರನೂ ಹಿಂಡಿ ಹೀರಿ
ಪ್ರಾಣಾಕರ್ಷಣೆಯ ಮಾಡಿ,
ಕಟ್ಟಿ ಕೆಡಹಿದಳಲ್ಲಾ! ಇವಳ
ಗೆಲುವ ಧೀರನಾರುವನೂ ಕಾಣೆ.
ಇವಳ ಬಾಣಕ್ಕೆ ಗುರಿಯಾಗಿ
ಏಳುತ್ತ ಬೀಳುತ್ತಲಿದ್ದರು ಎಲ್ಲರೂ-ಗುಹೇಶ್ವರಾ.
Transliteration Mūru lōkada dhīre nidrāṅgane,
ellaranū hiṇḍi hīri
prāṇākarṣaṇeya māḍi,
kaṭṭi keḍahidaḷallā! Ivaḷa
geluva dhīranāruvanū kāṇe.
Ivaḷa bāṇakke guriyāgi
ēḷutta bīḷuttaliddaru ellarū-guhēśvarā.
Hindi Translation तीन लोकों की हिम्मतवाली निद्रांगना
सब को खाली चूसना प्राणाकर्षण कर
बाँधेगिरा दिया न !
इसकोजीतनेहिम्मतवालेकोकिसीनेनहींदेखा
इसकेतीरकालक्ष्यबनेउठगिररहेथेसब
गुहेश्वरा
Translated by: Eswara Sharma M and Govindarao B N