Index   ವಚನ - 1454    Search  
 
ಮೂರುಲೋಕಕೊಂದು ಪುಷ್ಪ! ಆ ಪುಷ್ಪದ ಬಂಡ ಉಣಬಂಡ ತುಂಬಿಯ ನೋಡಾ! ತುಂಬುತ್ತ ಕೆಡಹುತ್ತಲೈದಾವೆ ಅವು ತಮ್ಮ ಪೂರ್ವಜನ್ಮಂಗಳಿಗೆ! ಅದಕ್ಕೆ ಇಕ್ಕಿದೆನು ಒರೆಯ, ಕಟ್ಟಿದೆನು ತೊಡರ, ಓಡದ ಬಿರುದು ಗುಹೇಶ್ವರಾ.