Index   ವಚನ - 1464    Search  
 
ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ ಭಕ್ತರೆಂತಾದಿರಿ ಭೋ! ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ ಜಂಗಮವೆಂತಾದಿರಯ್ಯಾ? ನಿಃಕಾಮಿಯಾಗಿ ನಿಃಪ್ರಿಯನಾಗಿ ನಿರ್ಮೋಹಿಯಾಗಿ, ನಿರಾಶ್ರಿತನಾಗಿ ನಿರ್ಲೇಪನಾಗಿ, ಉಭಯಗುಣ ರಹಿತನಾಗಿ, ಸರ್ವಾಂಗದಲ್ಲಿ ನಿರ್ಮೋಹಿಯಾಗಿ, ತನುಮನಧನಸುಖಾದಿಗಳ ನಿರ್ವಹಿಸಿ, ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು. ಆತನೆ ಜಂಗಮವೆಂಬುದಾಗಿತ್ತಾಗಿ ಗುಹೇಶ್ವರ ಲಿಂಗ ತಾನೆಂಬೆ.