ಯೋಗ ಶಿವಯೋಗವೆಂಬರು,
ಯೋಗದ ಶಿವಯೋಗದ ಹೊಲಬನಾರು ಬಲ್ಲರಯ್ಯಾ?
ಹೃದಯಕಮಲ ಮಧ್ಯದಲ್ಲಿ ಭ್ರಮಿಸುವ
ಜೀವ ಹಂಸನ ಗತಿಯನತಿ ಗಳೆದಲ್ಲದೆ
ಯೋಗವೆಂತಪ್ಪುದೊ?
ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ
ತಿಳಿದಲ್ಲದೆ ಯೋಗವೆಂತಪ್ಪುದೊ?
ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ
ಇರಬಲ್ಲಡೆ ಅದು ಯೋಗ!
`ಸ್ಯೋಹಂ' ಎಂಬಲ್ಲಿ ಸುಳುಹಡಗಿ
ಮನ ನಷ್ಟವಾಗಿರಬಲ್ಲ ಕಾರಣ,
ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರಧೀರನೆಂಬುದು
ಕಾಣಬಂದಿತ್ತು ನೋಡಾ, ಸಿದ್ಧರಾಮಯ್ಯಾ.
Hindi Translationयोग शिवयोग कहते,
योग की रीति कौन जानते?
हृदयकमल के बीच में भ्रम दूर किये बिना
योग कैसे होता है?
बावन अक्षर की लिपि पढ़ देख जाने बिना
योग कैसे होता है?
छ: स्थितियों पर रहे रत्न खचित भवन में रह सके तो
वह योग है।
सोऽहं कहने में सूझ छिपकर मन नष्ट होने के करण
गुहेश्वर लिंग में तू स्वतंत्र धीर कहना
दिखा दिया था देख सिद्धरामय्या।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura