ಲಿಂಗದಲ್ಲಿ ಆಗಾಗಿ ಅಂಗವಿರಹಿತನಾಗಿ
ಫಲವೇನಯ್ಯಾ?
ಜಂಗಮದಲ್ಲಿ ಸನ್ನಿಹಿತನಾಗಿ
ದಾಸೋಹವ ಮಾಡಿ ಫಲವೇನಯ್ಯಾ?
`ನೀ' `ನಾ' ಎಂಬ ಭಾವ ಉಳ್ಳನ್ನಕ್ಕರ
ಜಂಗಮದಲ್ಲಿ ಸಮಯಾಚಾರಿಯಾಗಿಪ್ಪನ್ನಕ್ಕರ
ಮಾಡುವ ಭಕ್ತಿಗೆ ಭಿನ್ನವದೆ.
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಂಗೆ
ಆಚರಣೆ ತಿಳಿಯದು ನೋಡಾ ಚೆನ್ನಬಸವಣ್ಣಾ.
Transliteration Liṅgadalli āgāgi aṅgavirahitanāgi
phalavēnayyā?
Jaṅgamadalli sannihitanāgi
dāsōhava māḍi phalavēnayyā?
`Nī' `nā' emba bhāva uḷḷannakkara
jaṅgamadalli samayācāriyāgippannakkara
māḍuva bhaktige bhinnavade.
Guhēśvaraliṅgadalli saṅganabasavaṇṇaṅge
ācaraṇe tiḷiyadu nōḍā cennabasavaṇṇā.
Hindi Translation लिंग में परिणामी बने अंग विरहित हो तो क्या फल?
जंगम में सन्निहित बने दासोह करे तो क्या फल?
‘तू’ ‘मैं’ जैसा भाव रहने तक
जंगम में समयाचारी बने रहने तक
करनेवाली भक्ति में भिन्नता है।
गुरेश्वरलिंग में संगनबसवण्णा को
आचरण न जानता देख चेन्नबसवण्णा।
Translated by: Eswara Sharma M and Govindarao B N