ವಚನ - 1479     
 
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು? ನಿಮ್ಮ ಅಂಗಮಯ ಲಿಂಗವಾದಡೆ ಸಂಸಾರದ ಅಂಗದ ಉಲುಹೇತಕ್ಕೆ? ಅದು ನಮ್ಮ ಗುಹೇಶ್ವರಲಿಂಗದಲ್ಲಿ ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ.