•  
  •  
  •  
  •  
Index   ವಚನ - 1504    Search  
 
ವಿಶ್ವಾಸದಿಂದ ಭಕ್ತನಾಗಿ, ಆ ವಿಶ್ವಾಸದೊಳಗಣ ನೈಷ್ಠೆಯಿಂದ ಮಹೇಶ್ವರನಾಗಿ, ಆ ನೈಷ್ಠೆಯೊಳಗಣ ಸಾವಧಾನದಿಂದ ಪ್ರಸಾದಿಯಾಗಿ, ಆ ಸಾವಧಾನದೊಳಗಣ ಸ್ವಾನುಭಾವದಿಂದ ಪ್ರಾಣಲಿಂಗಿಯಾಗಿ, ಆ ಸ್ವಾನುಭಾವದೊಳಗಣ ಅರಿವಿನಿಂದ ಶರಣನಾಗಿ, ಆ ಅರಿವು ನಿಜದಲ್ಲಿ ಸಮರಸಭಾವವನೈದಿ ನಿರ್ಭಾವ ಪದದೊಳು ನಿಂದ ಭೇದವೇ ಐಕ್ಯಸ್ಥಲ ಕಾಣಾ ಗುಹೇಶ್ವರಾ.
Transliteration Viśvāsadinda bhaktanāgi, ā viśvāsadoḷagaṇa naiṣṭheyinda mahēśvaranāgi, ā naiṣṭheyoḷagaṇa sāvadhānadinda prasādiyāgi, ā sāvadhānadoḷagaṇa svānubhāvadinda prāṇaliṅgiyāgi, ā svānubhāvadoḷagaṇa arivininda śaraṇanāgi, ā arivu nijadalli samarasabhāvavanaidi nirbhāva padadoḷu ninda bhēdavē aikyasthala kāṇā guhēśvarā.
Hindi Translation विश्वास से भक्त बने, उस विश्वास की निष्टा से महेश्वर बने, उस निष्टा के सावधान से प्रसादी बने, उस सावधान के स्वानुभाव से प्रणलिंगि बने, उस स्वानुभाव के ज्ञान से शरण बने, वह ज्ञान निज में समरस भाव से निर्भाव पद में खड़ा भेद ही ऐक्यस्थल देख गुहेश्वरा। Translated by: Eswara Sharma M and Govindarao B N