ವಚನ - 1511     
 
ವ್ರತಗೇಡಿ ವ್ರತಗೇಡಿ ಎಂಬರು, ವ್ರತ ಕೆಡಲು ಅದೇನು ಹಾಲಂಬಿಲವೆ? ವ್ರತ ಕರಿದೊ? ಬಿಳಿದೊ? ಕಟ್ಟಿದಾತ ಭಕ್ತನಪ್ಪನೆ? ಕೆಡಹಿದಾತ ವೈರಿಯಪ್ಪನೆ? ಕಟ್ಟುವುದಕ್ಕೆ ಲಿಂಗವು ಒಳಗಾಗಬಲ್ಲುದೆ? ಕೆಡಹುವುದಕ್ಕೆ ಲಿಂಗವು ಬೀಳಬಲ್ಲುದೆ? ಲಿಂಗವು ಬಿದ್ದಡೆ ಭೂಮಿ ಆನಬಲ್ಲುದೆ? ಲೋಕಾದಿ ಲೋಕಂಗಳುಳಿಯಬಲ್ಲವೆ? ಪ್ರಾಣಲಿಂಗ ಬಿದ್ದಿತ್ತೆಂಬ ದೂಷಕರ ನುಡಿಯ ಕೇಳಲಾಗದು ಗುಹೇಶ್ವರಾ.