ಶ್ರೀಗುರು ಲಿಂಗ ಜಂಗಮದ ಕರುಣ ಕಟಾಕ್ಷೆಯಿಂದ
ದಶವಿಧ ಲಿಂಗಂಗಳ ಪಡೆದು
ಆ ಲಿಂಗನಿಷ್ಠಾಪರತ್ವದಿಂದ, ನಿನ್ನ ಪ್ರಾಣನ ಮಧ್ಯದಲ್ಲಿ ನೆಲಸಿರ್ಪ
ದಶವಿಧ ಚಿದ್ವಾಯುಗಳು, ದಶವಿಧ ಸುನಾದಗಳು,
ದಶವಿಧಸತ್ಕರಣಂಗಳನ್ನು
ಮಹಾಜ್ಯೋತಿರ್ಮಯಲಿಂಗದತ್ತ ಮುಖಮಾಡಿ ನೋಡಲು
ಮಹಾಶರಣಗಣಮಾರ್ಗದ
ಬಟ್ಟಬಯಲ ನಿಜಾಚರಣೆ ದೊರೆವುದು ನೋಡ!
ಗುಹೇಶ್ವರ ಲಿಂಗದಲ್ಲಿ ಚೆನ್ನಬಸವಣ್ಣ.
Hindi Translationश्रीगुरु लिंग जंगम के करुण कटाक्षा से दश विध लिंग पाये,
उसे लिंगनिष्टा परत्व से, तेरे प्राण मध्य में रहे,
दशविध चिद्वायु, दशविध सुनाद, दशविध सत्करणों को,
महा ज्योतिर्मय लिंग की तरफ मुख कर देखे तो
महाशरण गणमार्ग का__
शून्य जगह निजाचरण मिलेगा देख!
गुहेश्वर लिंग में चेन्नबसवण्णा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura