ವಚನ - 153     
 
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ? ಲಿಂಗ ಎಡನೊ ಬಲನೊ? ಬಲ್ಲಡೆ ನೀವು ಹೇಳಿರೆ? ಲಿಂಗ ಮುಂದೊ ಹಿಂದೊ? ಬಲ್ಲಡೆ ನೀವು ಹೇಳಿರೆ? ಲಿಂಗ ಸ್ಥೂಲವೊ ಸೂಕ್ಷ್ಮವೊ? ಬಲ್ಲಡೆ ನೀವು ಹೇಳಿರೆ? ಲಿಂಗ ಪ್ರಾಣವೊ, ಪ್ರಾಣ ಲಿಂಗವೊ? ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು?