•  
  •  
  •  
  •  
Index   ವಚನ - 152    Search  
 
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ವಿಷಯವನತಿಗಳೆದಲ್ಲಿ ಫಲವೇನೊ? ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು-ಗುಹೇಶ್ವರಾ.
Transliteration Pan̄cēndriya saptadhātuvanatigaḷedalli phalavēno? Kāma krōdha lōbha mōha mada matsara viṣayavanatigaḷedalli phalavēno? Ivellava konda pāpa nim'ma tāguvudu-guhēśvarā.
Hindi Translation पंचेंद्रिय सप्त धातुओं को निरादर करने से क्या फल है? काम क्रोध लोभ मोह मद मत्सर विषयों को निरादर करने से क्या फल है? इन सब को मारने का पाप तुम्हें लगता है गुहेश्वरा। Translated by: Eswara Sharma M and Govindarao B N
Tamil Translation ஐம்புலன் ஏழுதாதுக்களை மீறுவதால் என்ன பயன்? அறுபகையை மீறுவதால் என்ன பயன்? இவ்வனைத்தையும் கொன்ற பாபம் உம்மைச் சாருமன்றோ குஹேசுவரனே!. Translated by: Smt. Kalyani Venkataraman, Chennai
ಶಬ್ದಾರ್ಥಗಳು ಪಂಚೇಂದ್ರಿಯ = ಶ್ರೋತ್ರ, ತ್ವಚ, ನೇತ್ರ, ರಸನ ಮತ್ತು ಘ್ರಾಣ ಎಂಬ ಶಬ್ದಾದಿ ವಿಷಯಗಳನ್ನು ಗ್ರಹಿಸುವ ಪಂಚಜ್ಞಾನೇಂದ್ರಿಯಗಳು; ಸಪ್ತಧಾತು = ಸಪ್ತಧಾತುಗಳಿಂದ ಕೂಡಿದ ಸ್ಥೂಲದೇಹ; Written by: Sri Siddeswara Swamiji, Vijayapura