Index   ವಚನ - 1535    Search  
 
ಸಂಗಿಯಲ್ಲದ ನಿಸ್ಸಂಗಿಯಲ್ಲದ, ರೂಪಿಲ್ಲದ ನಿರೂಪಿಲ್ಲದ ಸುಳುಹು ನೋಡಾ! ಧ್ವೈತವಿಲ್ಲದ ಅಧ್ವೈತವಿಲ್ಲದ, ಸೀಮೆಯಿಲ್ಲದ ನಿಸ್ಸೀಮೆಯಿಲ್ಲದ ಸುಳುಹು ನೋಡಾ! ನಡೆಯಿಲ್ಲದ ನುಡಿಯಿಲ್ಲದ ಒಡಲಿಲ್ಲದ ಸುಳುಹು ನೋಡಾ! ಕಡೆ ಮೊದಲೆಡೆದೆರಹಿಲ್ಲದಕಂಡ ಗುಹೇಶ್ವರಲಿಂಗ ನಿರಾಳ ನಿಜೈಕ್ಯ ನೋಡಾ.