ವಚನ - 1549     
 
ಸಮಯವ ಬಿಡಬಹುದೆ ಅಯ್ಯಾ? ಅಟ್ಟ ಅಶನವಾದಡೂ ಕಲಸುವದಕ್ಕೆ ಕೈ, ಉಂಬುದಕ್ಕೆ ಬಾಯಿ ಬೇಕು. ಉಂಬುದಿಲ್ಲಾ ಎಂದು ಸಂದೇಹವ ಹರಿದಲ್ಲಿ ಸಮಯ ಒಂದೂ ಇಲ್ಲ ಎನಬೇಕು. ಗುಹೇಶ್ವರನೆಂಬನ್ನಕ್ಕ, ಬಂಧ-ಮೋಕ್ಷವನರಿಯಬೇಕು ಘಟ್ಟಿವಾಳಯ್ಯಾ.