ವಚನ - 1555     
 
ಸಹಭಾಜನ ಸಹಭೋಜನವೆಂದೆಂಬರು. ಭಾಜನವಾವುದು ಭೋಜನವಾವುದು ಎಂದರಿಯರು. ಭಾಜನವೆ ಅಂಗ, ಭೋಜನವೆ ಲಿಂಗ! ಭಾಜನಸಹಿತ ಭೋಜನಮಾಡುವ ಹಿರಿಯರು, ಭಾಜನವನಿರಿಸಿ ಹೋದಡೆ ಅದೆ ಭಂಗ ಗುಹೇಶ್ವರಾ.