Index   ವಚನ - 1565    Search  
 
ಸುತ್ತಲಿಲ್ಲದ ವ್ಯಾಧ ಸುಳಿಯಲಿಲ್ಲದ ಮೃಗವು. ಒತ್ತಿದನು ಆ ಮೃಗವ ಇರುಬಿನಲ್ಲಿಗೆ ಅಯ್ಯಾ. `ಸೋವೋವ' `ಸೋವೋವ' ಎಂದೆನುತ್ತ ಒತ್ತಿದ ಮೃಗವು ಇರುಬುಗೊಂಡಿತ್ತು. ಇರುಬಿನ ಕುಳಿಯೊಳಗೆ ಕೊಲ್ಲದೆ ಕೊಂದನಲ್ಲಾ ಮೃಗವನು. ಅಳಿಯದೆ ಅಳಿದುದಲ್ಲಾ! ಮಾಡಲಿಲ್ಲದ ಸಯದಾನ, ನೀಡಲಿಲ್ಲದ ಬೋನ ಅರ್ಪಿತವಿಲ್ಲದ ತೃಪ್ತಿ, ಗುಹೇಶ್ವರಲಿಂಗಕ್ಕೆ.