ವಚನ - 1564     
 
ಸುಖವನರಿಯದ ಹೆಣ್ಣು ಸೂಳೆಯಾದಳು, ಲಿಂಗವನರಿಯದಾತ ಶೀಲವಂತ ಶೀಲವಂತನಾದ. ಈ ಸೂಳೆಗೆ ಸುಖವುಂಟೆ? ಈ ಶೀಲಕ್ಕೆ ಗತಿಯುಂಟೆ? ಈ ಉಭಯರುಗಳು ಕೆಟ್ಟ ಕೇಡ ನೋಡಾ ಗುಹೇಶ್ವರಾ.